ಟಾಗಲಾಗ್ ಫಿಲಿಪ್ಪೀನ್ಸ್ ದೇಶದ ಪ್ರಮುಖ ಭಾಷೆಗಳಲ್ಲಿ ಒಂದು. ಮಾತುಗಾರರ ಸಂಖ್ಯೆಯ ಆಧಾರದಲ್ಲಿ ಇದು ಫಿಲಿಪ್ಪೀನ್ಸ್‍ನ ಅತ್ಯಂತ ಪ್ರಚಲಿತ ಭಾಷೆ. ಆಸ್ಟ್ರೋನೇಸ್ಯ ಭಾಷಾ ಕುಟುಂಬದ ಮಲಯೊ-ಪಾಲಿನೇಸ್ಯ ವಿಭಾಗಕ್ಕೆ ಸೇರಿರುವ ಈ ಭಾಷೆಯು ಸುಮಾರು ೨೨ ಮಿಲಿಯನ್ ಜನರ ಮಾತೃಭಾಷೆಯಾಗಿದೆ.